ತೋಟದಲ್ಲಿ ಕಟ್ಟಿದ ಎತ್ತುಗಳ ಕಳ್ಳತನ ರೈತ ಶಿವಪ್ಪ ಕಂಗಾಲು

ತೋಟದಲ್ಲಿ ಕಟ್ಟಿದ್ದ ಎತ್ತುಗಳ ಕಳ್ಳತನ ರೈತ ಕಂಗಾಲು

ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಚಿಕ್ಕನಹಳ್ಳಿ ಗ್ರಾಮದಲ್ಲಿ ರೈತರು ತಮ್ಮ ತೋಟದಲ್ಲಿ ಕಟ್ಟಿದ್ದ ಎತ್ತುಗಳು ರಾತ್ರಿ ಕಳ್ಳರು ಕದ್ದು ಪರಾರಿಯಾಗಿರುವ ಘಟನೆ ನಡೆದಿದೆ.

ಗ್ರಾಮಕ್ಕೆ ಹೊಂದಿಕೊಂಡಿರುವ ತೋಟದಲ್ಲಿ ಎತ್ತುಗಳನ್ನು ಕಟ್ಟಿಕೊಂಡು ರೈತ ಅಲ್ಲೇ ಮಲಗಿದ್ದರು ಸಹ ರೈತನ ಗಮನಕ್ಕೆ ಬಾರದ ರೀತಿಯಲ್ಲಿ ಐನ್ಯಾತಿ ಕಳ್ಳರು ರೈತ ಶಿವಪ್ಪ ಕೂರು ಎನ್ನುವವರಿಗೆ ಸೇರಿದ ಲಕ್ಷಾಂತರ ಮೌಲ್ಯದ ಎತ್ತುಗಳನ್ನು ಕದ್ದುಪರಾರಿಯಾಗಿದ್ದು ಸದ್ಯ ರೈತ ಕಂಗಲಾಗಿದ್ದಾನೆ.

ಸದೆ ಎತ್ತುಗಳನ್ನು ಕಳೆದುಕೊಂಡು ನಷ್ಟದಲ್ಲಿರುವ ರೈತ ಯಾರು ಸಹ ತೋಟದಲ್ಲಿ ಎತ್ತುಗಳನ್ನು ಕಟ್ಟದಂತೆ ಮನವಿ ಮಾಡಿದ್ದಾನೆ